Author : SAISUTHE
ISBN No : 9789383053315
Language : Kannada
Categories : KANNADA
Publisher : SUDHA ENTERPRISES
ಅಗಾಧವಾದ ಶ್ರಮವಿಲ್ಲದೆ ಅಗಾಧವಾದುದನ್ನು ಸಾಧಿಸಲಾಗದು? ಇದು ಸ್ವಾಮಿ ವಿವೇಕಾನಂದರ ಮಾತುಗಳು. ಇದು ಎಲ್ಲಾ ಕಾಲಕ್ಕೂ ಎಲ್ಲಾ ಕೆಲಸಗಳಿಗೂ ಅನ್ವಯವಾಗುವಂಥದ್ದು. ಇದನ್ನು ಸ್ವಲ್ಪ ಬದಲಾಯಿಸಿಕೊಳ್ಳೋಣ. ?ಅಗಾಧವಾದ ತ್ಯಾಗದಿಂದ ಅಗಾಧವಾದುದನ್ನು ಸಾಧಿಸೋಣ.?
"ಭಾಗವತ್ ಮುಚ್ಚಿಹೋದರೆ ಇಡೀ ಕುಟುಂಬ ಮಾತ್ರವಲ್ಲ, ನೂರಾರು ಕುಟುಂಬಗಳ ಬದುಕಿನ ಪ್ರಶ್ನೆ. ಕೆಲವು ಕುಟುಂಬಗಳಾದರೂ ನೆಲೆ ಕಳೆದುಕೊಂಡು ಬೀದಿಗೆ ಬರುತ್ತೆ! ಅವರಲ್ಲಿ ಎಷ್ಟು ಆತ್ಮಹತ್ಯೆಗಳಾಗಬಹುದು? ನೆಲೆ ತಪ್ಪಿದ ಕುಟುಂಬದ ವಾರಸುದಾರರಲ್ಲಿ ಕೆಲವರಾದರೂ ಪುಂಡರು, ಪೋಕರಿಗಳು, ಸಮಾಜ ಕಂಟಕರಾಗುತ್ತಾರೆ. ಅದರ ಜವಾಬ್ದಾರಿ ಯಾರದು? ನಮಗೆ ನೇರವಾಗಿ ಬೇಡಿ ತೊಡಿಸಿ ಕಾನೂನಿನ ಮುಂದೆ ನಿಲ್ಲಿಸದಿದ್ದರೂ, ಅದರ ಪೂರ್ಣ ಪಾಲಂತು ಈ ಕುಟುಂಬದ್ದು. ಇಷ್ಟೆಲ್ಲ ದುರಂತವನ್ನು ಒಂದೇ... ಒಂದು ನಿರ್ಣಯದಿಂದ ತೊಡೆದುಹಾಕುವ ಅವಕಾಶ ಭಾಗವತ್ ಫ್ಯಾಮಿಲಿಯ ವಾರಸುದಾರರಿಗೆ ಸಿಕ್ಕಿದೆ. ಪ್ಲೀಸ್... ಅದನ್ನ ಬಳಸಿಕೊಂಡು ದೊಡ್ಡ ದುರಂತವನ್ನ ತಪ್ಪಿಸಿ.??
ಇಷ್ಟು ಹೇಳಿದ ದೀಪಿಕಾ ಎದೆಯಲ್ಲಿ ದೊಡ್ಡ ವಿಪ್ಲವ. ಅದನ್ನು ಮೆಟ್ಟಿನಿಲ್ಲಲು ಅವಳಿಗೆ ಹೇಗೆ ಸಾಧ್ಯವಾಯಿತು?