Author : SAISUTHE
ISBN No : 9789381119600
Language : Kannada
Categories : KANNADA
Publisher : SUDHA ENTERPRISES
ಹೆಚ್ಚು ಚರ್ಚಿತವಾದ ಕಥಾವಸ್ತು. ಆದರ್ಶ, ಮೌಲ್ಯಗಳನ್ನು ಕೂಡಿಸಿಕೊಂಡ ಹೆಣ್ಣು ಪ್ರೀತಿ, ಪ್ರೇಮ, ಸಂಬಂಧಗಳ ವಿಚಾರದಲ್ಲಿ ಸವಕಲಾಗಿದ್ದು ಯಾಕೆ? ಪ್ರಗತಿಗಾಮಿ ಮನೋಭಾವದ ಹೆಣ್ಣುಗಳು ನನ್ನಲ್ಲಿ ಚರ್ಚಿಸಿದ್ದುಂಟು. ಅವರೆಲ್ಲ ನನ್ನ ಬರವಣಿಗೆಯಲ್ಲಿ ಪಾತ್ರಗಳಾಗಿದ್ದಾರೆ.
ಕತೆ, ಕಾದಂಬರಿಗಳಲ್ಲಿ ಪಾತ್ರಗಳಾಗುವ ಆಸೆ ಯಾರಿಗಿಲ್ಲ? ಕಾದಂಬರಿಯಲ್ಲಿನ ಪಾತ್ರಗಳ ಸುಖದುಃಖಗಳನ್ನು ತಮ್ಮದೇ ಎಂಬಂತೆ ಅನುಭವಿಸಿ ಸುಖಿಸುವ, ದುಃಖಿಸುವ, ಪ್ರತಿಕ್ರಿಯಿಸುವ ಓದುಗರಿಗೆ ನನ್ನ ಮೊದಲ ನಮನಗಳು.
'ರಜತಾದ್ರಿಯ ಗರ್ಭದಲ್ಲಿ ನೂರು ಕನಸುಗಳು ಹುದುಗಿಹೋಗಿವೆ. ಭಾಮಿನಿ ಅದರ ಮೇಲೆ ಕಲ್ಲು ಚಪ್ಪಡಿ ಎಳೆದವಳು. ಅದನ್ನು ಶಾರದ ತೆಗೆದಿದ್ದಾಳೆ. ಈಗ ಎಲ್ಲಾ ಕನಸುಗಳು ನನಸಾಗಲಿ.'