Author : SAISUTHE
ISBN No : 5551234010212
Language : Kannada
Categories : KANNADA
Publisher : SUDHA ENTERPRISES
ಜೀವನದುದಯ ರಹಸ್ಯ, ಜೀವನ ವಿಲಯ ರಹಸ್ಯ |
ಜೀವನದ ದೃಶ್ಯ ಮರುವಿನ ಬಿಸಿಲ್ಗುದರೆ ||
ಭಾವಿಸಲದೇ ತತ್ವ - ಬ್ರಹ್ಮಮಾಯೆಯ ವಿಶ್ವ |
ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ.
ಇವು ಪೂಜ್ಯ ಡಿ.ವಿ.ಜಿ. ಯವರ ಮಾತುಗಳು. ಹುಟ್ಟು-ಸಾವುಗಳ ರಹಸ್ಯಮಯ ಮರೀಚಿಕೆಯಂತೆ ನಮ್ಮದೆನ್ನುವ ಭ್ರಮೆಯ ಬದುಕು ಇಷ್ಟವಾಗುತ್ತೆ. ಆದರೆ ಆ ಭ್ರಮೆಯೆ ಮಾರಕವಾಗಬಹುದು. ಭ್ರಮೆ ಮತ್ತು ಜ್ಞಾನದ ಮಧ್ಯೆ ಇದ್ದು ಇಲ್ಲದಂತೆ ತಾವರೆ ಎಲೆಯ ಮೇಲಿನ ನೀರ ಬಿಂದುವಿನಂತೆ ಇದ್ದರೇ, ಬದುಕು ಸುಂದರ ಅರುಣೋದಯದೊಂದಿಗೆ ಕರಗಿಹೋಗುವುದೇ ಬದುಕಿನ ಬ್ರಹ್ಮ ತತ್ವದ ಮೂಲ.
ಮನಸ್ಸಿನ ಪ್ರತಿಬಿಂಬ ನಮ್ಮ ಚಿಂತನೆಯಂತೆ ನಮ್ಮ ಬದುಕು. ಅನಗತ್ಯ, ವಸ್ತುಗಳು, ಆಸೆಗಳು, ಚಿಂತನೆಗಳು ಅದೊಂದು ದೊಡ್ಡ ಭಾರವಾಗಿ ನಮ್ಮನ್ನು ಅಧೋಗತಿಗೆ ತಳ್ಳುತ್ತೆ. ಒಮ್ಮೆ ಇದು ನಮ್ಮ ಅರಿವಿಗೆ ಬಂತೋ ಅನಂತರದ ಪ್ರಯಾಣ ಸುಲಭ. ಆಸೆ-ಅಗತ್ಯಗಳ ಭಾರ ಎಷ್ಟು ಕಡಿಮೆ ಭಾರವೋ, ಅಷಷ್ಟು ಬದುಕು ಸುಲಭ ಸರಳ.
Details